Tuesday 11 October 2016

test

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವಿಜಯಪುರ ಜಿಲ್ಲೆ

 ಬಸ್‍ಸ್ಟ್ಯಾಂಡ್ ಹತ್ತಿರ ನವಭಾಗ
ವಿಜಯಪುರ ಜಿಲ್ಲೆ
ಮೊಬೈಲ್: ೯೫೩೧೮೬೨೮೫೩೧

    ಮಾನ್ಯ ಮುಖ್ಯಮಂತ್ರಿಗಳು
      ಕರ್ನಾಟಕ ಸರ್ಕಾರ
ಬೆಂಗಳೂರು

    ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ

ವಿಷಯ: ಎಫ್.ಡಿ.ಎ ಮರುಪರೀಕ್ಷೆ ನಡೆಸಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಷಣ ಶಿಕ್ಷೆ ನೀಡಲು ಆಗ್ರಹಿಸಿ

      ಮಾನ್ಯರೆ, ಕರ್ನಾಟಕದಲ್ಲಿ ಪದವಿ ಪ್ರಮಾಣ ಪತ್ರ ಪಡೆದುಕೊಂಡು ಲಕ್ಷಾಂತರ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಬೀದಿಬೀದಿಯಲ್ಲಿ ಅಲೆಯುತ್ತಿದ್ದಾರೆ. ಉದ್ಯೋಗ ಕೊಡಬೇಕಾದ ಸರ್ಕಾರಗಳು ನೇಮಕಾತಿಯ ಹೆಸರಿನಲ್ಲಿ ಅವ್ಯವಹಾರ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಒಟ್ಟಾರೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತ್ತಿದೆ. ೨೦೧೫ ಅಕ್ಟೋಬರ್‌ನಲ್ಲಿ ನಡೆದ ಎಫ್.ಡಿ.ಎ. ಪರೀಕ್ಷೆಗೆ ೪,೫೦,೦೦೦ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷಾ ನಡೆದ ದಿನದಂದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಲೀಲಾಜಾಲವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಸುದ್ದಿ ಹರಡಿತ್ತು. ಆ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರ್‍ಆಟ ಸಮಿತಿ ವತಿಯಿಂದ ಪ್ರತಿಭಟನಾ ರ್‍ಯಾಲಿ, ಮಾನವ ಸರಪಳಿ, ರಸ್ತಾ ರೋಕ,  ಹಲವಾರು ಹೋರಾಟದ ಮೂಲಕ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಜಾಣ ಕಿವುಡ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಇತ್ತೀಚೆಗೆ ಕೆ.ಪಿ.ಎಸ್.ಸಿ. ಪ್ರಕಟಿಸಿರುವ ಲಿಸ್ಟ್‍ನ ಪ್ರಕಾರ ೧:೨ಕ್ಕೆ ಸಂದರ್ಶನ ಕರೆದಿರುವುದು ಅವೈಜ್ಞಾನಿಕ ಮತ್ತು ಹಲವು ಸಂಶಯಗಳನ್ನು ಹುಟ್ಟಲು ಎಡೆಮಾಡಿಕೊಟ್ಟಿದೆ. ಇದಕ್ಕೆ ಪುಷ್ಟೀಕರಣ ಎನ್ನುವಂತೆ ಒಂದೇ ಸೆಂಟರ್‌ನಲ್ಲಿ ಮತ್ತು ಒಂದೇ ಜಿಲ್ಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿರುವುದು ನೋಡಿದರೆ, ಪ್ರಶ್ನೆಪತ್ರಿಕೆಯ ಸೋರಿಕೆಗೆ ಕೈಗನ್ನಡಿಯಾಗಿದೆ ಮತ್ತು ಕಿಂಗ್‍ಪಿನ್ ಶಿವಕುಮಾರನ ಸಹಚರ ಕಿರಣಕುಮಾರ ಸಿ.ಐ.ಡಿ. ತನಿಖೆಯ ಸಂದರ್ಭದಲ್ಲಿ ಎಫ್.ಡಿ.ಎ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಆದ್ದರಿಂದ ಕೆ.ಪಿ.ಎಸ್.ಸಿ. ತನ್ನ ಈ ಸಂದರ್ಶನವನ್ನು ಕೈಬಿಟ್ಟು ಮರುಪರೀಕ್ಷೆ ನಡೆಸಲು ಅನುಮತಿ ಮಾಡಿಕೊಡಬೇಕೆಂದು ವಿನಂತಿ.

ಬೇಡಿಕೆಗಳು:
೧. ಎಫ್.ಡಿ.ಎ. ಮರುಪರೀಕ್ಷೆ ನಡೆಸಬೇಕು
೨. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡಬೇಕು.


                      ತಮ್ಮ ವಿಶ್ವಾಸಿ
ಸಿದ್ಧಲಿಂಗ ಬಾಗೇವಾಡಿ
ರಾಜ್ಯ ಕಾರ್ಯದರ್ಶಿಗಳು
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ
ಬೆಂಗಳೂರು

No comments:

Post a Comment