Monday 1 August 2016

ವಚನಗಳು

ಎನಿಸುಕಾಲ ಕಲ್ಲು ನೀರೊಳಗಿದ್ದರೇನು
ನೆನ್ದು ಮೃದುವಾಗಬಲ್ಲುದೇ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ಧೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿದ್ದ ಬೆಂತರನಂತೆ
ಅದರ ವಿಧಿ ಎನಗಾಯಿತ್ತು ಕೂಡಲಸಂಗಮದೇವಾ|





ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ
ಕಾಮಿನಿ ನಿನ್ನವಳಲ್ಲ ಅದು ಜಗಕಿಕ್ಕಿದ ವಿಧಿ 
ನಿನ್ನೊಡವೆ ಎಂಬುದು ಜ್ಞಾನರತ್ನ
ಅಂತಪ್ಪ ದಿವ್ಯರತ್ನವ ಕೆಡೆಗೊಡದೆ
ಆ ರತ್ನವ ನೀನಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ ನಿನ್ನಿಂದ
ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೇ!


ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,
ತ್ರೇತಾಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬೈದು ಬುದ್ಧಿಯ 
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ದ್ವಾಪರಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ 
ಕಲಿಸಿದರೆ ಆಗಲಿ ಮಹಾಪ್ರಸಾದವೆಂದನಯ್ಯಾ,


ಆವ ವಿದ್ಯೆಯ ಕಲಿತಡೇನು?
ಸಾವ ವಿದ್ಯೆಯ ಬೆನ್ನ ಬಿಡದು
ಆಶನವ ತೊರೆದಡೇನು ವ್ಯಸನವ ಮರೆದಡೇನು?
ಉಸಿರ ಹಿಡಿದಡೇನು ಬಸುರ ಕಟ್ಟಿದಡೇನು?
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?



`ಹರ ಬಸವಾಯ ನಮಃ' ಎಂದು ಪಾಪ ದೂರ್‍ಅನಾದೆ,
`ಗುರು ಬಸವಾಯ ನಮಃ' ಎಂದು ಭವದೂರ್‍ಅನಾದೆ,
`ಲಿಂಗ ಬಸವಾಯ ನಮಃ' ಎಂದು ಲಿಂಗಾಂಕಿತನಾದೆ
`ಜಂಗಮ ಬಸವಾಯ ನಮಃ' ಎಂದು ನಿಮ್ಮ
ಪಾದಕಮಲದಲ್ಲಿ ಭ್ರಮರನಾದೆ
ಏಳು ಸಂಗನಬಸವ ಗುರು, ಕಪಿಲ ಸಿದ್ಧ ಮಲ್ಲಿಕಾರ್ಜುನ ಸ್ವಾಮಿಯೇ. 
                      - ಸಿದ್ಧರಾಮ

ಕೋಚಿಂಗ್ ಇಲ್ಲದೆ ಪರೀಕ್ಷೆಗೆ ತಯಾರಿ ಹೇಗೆ?

ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್ ಕೇಂದ್ರಗಳಲ್ಲಿ ತರಬೇತು ಪಡೆಯಲೇಬೇಕು ಎಂಬ ಮಿಥ್ಯೆ ಹಲವರಲ್ಲಿ ಇದೆ. ಆದರೆ, ಕೋಚಿಂಗ್ ಕೇಂದ್ರಗಳ ನೆರವು ಪಡೆಯದೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದೆಂದು ಸಾಕಷ್ಟು ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದಾರೆ.

 ಮನೆಯಲ್ಲೇ ಕುಳಿತು ಸ್ವಯಂ ಬುದ್ಧಿಶಕ್ತಿಯಿಂದ ಪರೀಕ್ಷೆಗೆ ಸಿದ್ಧರಾಗಲು ಇಲ್ಲಿದೆ ಟಿಪ್ಸ್. ಮೊದಲಿಗೆ ಕೋಚಿಂಗ್ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತದೆ ಎಂದು ತಿಳಿದುಕೊಳ್ಳೋಣ. ಕೋಚಿಂಗ್ ಕ್ಲಾಸ್ನಲ್ಲಿ ನಿಯಮಿತ ಕ್ಲಾಸ್ ಇರುತ್ತದೆ.

ಪ್ರತಿಯೊಂದು ವಿಷಯಕ್ಕೂ ಗಮನ ನೀಡಲು ಸಾಧ್ಯವಾಗುತ್ತದೆ. ಪ್ರತಿವಾರದ ಅಂತ್ಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಬೇಕಾದ ಸ್ಟಡಿ ಮೆಟಿರಿಯಲ್ ಲಭ್ಯತೆಯೂ ಅಲ್ಲಿ ಸಾಕಷ್ಟಿರುತ್ತದೆ. ಅಲ್ಲಿ ನಿಮ್ಮೊಂದಿಗೆ ಸಾಕಷ್ಟು ಇತರ ವಿದ್ಯಾರ್ಥಿಗಳೂ ಇರುತ್ತಾರೆ. ಅವರೊಂದಿಗೆ ಸಾಕಷ್ಟು ಚರ್ಚೆಗಳನ್ನೂ ನಡೆಸಬಹುದು. ಏನಾದರೂ ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಉತ್ತಮವಾದ ತರಬೇತುದಾರರಿರುತ್ತಾರೆ.

 ಈಗಾಗಲೇ ಪರೀಕ್ಷೆ ಬರೆದವರೂ ಇರುತ್ತಾರೆ. ಮನೆಯಲ್ಲೇ ತಯಾರಿ ನಡೆಸಿ ನಿಮ್ಮ ಮನೆಯಲ್ಲಿ ಕೋಚಿಂಗ್ ಸೆಂಟರ್ನಂತೆ ಓದುವ ವಾತಾವರಣ ಇರುವುದು ಕಷ್ಟ. ಆಟವಾಡುವ ಮಕ್ಕಳ ಸದ್ದು, ಅಡುಗೆಮನೆಯಿಂದ ಬರುವ ಸುವಾಸನೆ, ಧಾರಾವಾಹಿಯ ಡೈಲಾಗ್ಗಳು, ಆಗಾಗ ಬರುವ ಅತಿಥಿಗಳು, ಪಕ್ಕದ ಬೀದಿಯಲ್ಲಿ ಕಾಣಿಸುವ ಚಂದದ ಹುಡುಗಿ... ಹೀಗೆ ನಿಮ್ಮ ಓದಿಗೆ ಭಗ್ನ ತರುವ ಸಾಕಷ್ಟು ಅಂಶಗಳಿರಬಹುದು. ಆದರೂ, ಮನಸ್ಸು ಮಾಡಿದರೆ ಮನೆಯಲ್ಲಿ ಕುಳಿತು ಓದಿ ಯಶಸ್ಸು ಪಡೆಯಬಹುದು.

ನಿಯಮಿತ ಅಧ್ಯಯನ

ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ಟೈಂಟೇಬಲ್ ಹಾಕಿಕೊಳ್ಳಿ.ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ, ಡಯೆಟ್, ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ.

ಸಿಲೆಬಸ್ ಇರಲಿ

 ನೀವು ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್, ಕೊಶ್ಚನ್ ಪೇಪರ್ಗಳನ್ನು ಪಡೆದುಕೊಳ್ಳಿ. ಇಂತಹ ಸರಕುಗಳು ಯುಪಿಎಸ್ಸಿ, ಕೆಪಿಎಸ್ಸಿ ಇತ್ಯಾದಿ ವೆಬ್ಸೈಟ್ಗಳಲ್ಲೇ ದೊರಕುತ್ತದೆ. ಆಯಾ ಸಿಲೆಬಸ್ಗೆ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿರಿ.

ರಿವಿಷನ್

ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ನೀವು ಓದಿರುವ ಸಿಲೆಬಸ್ಗಳನ್ನು ಓದಿಕೊಳ್ಳಿ. ವಿಷಯಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಇದರಿಂದ ನಿಮ್ಮ ಮೆಮೊರಿ ಪವರ್ ಸಹ ಉತ್ತಮಗೊಳ್ಳುತ್ತದೆ.

ಹಳೆ ಪ್ರಶ್ನೆಪತ್ರಿಕೆ

ಈ ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ. ಇದರಿಂದ ನಿಮಗೆ ಸಮಯದ ನಿರ್ವಹಣೆ, ವಿಷಯದ ಕುರಿತು ಅರಿವು ಇತ್ಯಾದಿ ಅನೇಕ ಲಾಭಗಳಿವೆ.

ಹೊಸ ಪುಸ್ತಕಗಳನ್ನು ಖರೀದಿಸಿ

 ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ವಿಕೆ ಮಿನಿಯಲ್ಲಿ ಪ್ರಕಟಗೊಳ್ಳುವ ಪ್ರಶ್ನೋತ್ತರ, ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ. ಸಮೀಪದ ಲೈಬ್ರೇರಿಗಳಿಗೆ ಭೇಟಿ ನೀಡುತ್ತಿರಿ.

ಇಂಟರ್ನೆಟ್ ನೆರವು

 ನಿಮ್ಮಲ್ಲಿ ಇಂಟರ್ನೆಟ್ ಸೌಲಭ್ಯವಿದ್ದರೆ ದೊಡ್ಡ ಲೈಬ್ರೇರಿ ನಿಮ್ಮ ಬಳಿ ಇದ್ದಂತೆ. ಇಂಟರ್ನೆಟ್ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್ಸೈಟ್ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ.

 ಸ್ಮಾರ್ಟ್ಫೋನ್ ಮೂಲಕ

: ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಿಡುವು ಸಿಕ್ಕಾಗ ಅಧ್ಯಯನ ಮಾಡಿ. ಬಸ್, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಕೈಗೊಂಡಾಗಲೂ ಆ್ಯಪ್ ಮೂಲಕ ಅಧ್ಯಯನ ನಡೆಸಬಹುದು.

ಗುಂಪು ಚರ್ಚೆ

ನಿಮ್ಮೂರಿನಲ್ಲಿ ನಿಮ್ಮಂತೆ ಪರೀಕ್ಷೆ ಬರೆಯುವವರಿದ್ದರೆ ಅವರ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಗುಂಪು ಚರ್ಚೆ ನಡೆಸಿ.

Millennium Coaching classes

Our coaching classes Pamphlet