Sunday 21 May 2017

Students study in Hostel - Home work

ಪ್ರತಿದಿನ ಶಿಕ್ಷಕರ ಹಾಗೂ ನಿಲಯ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗೆ ಹೋಂವರ್ಕ್ ಮಾಡಿಸಲಾಗುತ್ತದೆ. 

Teaching through Laptop computer

ಲ್ಯಾಪ್‍ಟಾಪ್ ಮೂಲಕ ನಮ್ಮ ಕೋಚಿಂಗ್ ಕ್ಲಾಸ್‍ನ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು. 

Wednesday 3 May 2017

student profile

ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಪ್ರಗತಿಯನ್ನು ವೈಯುಕ್ತಿಕವಾಗಿ ದಾಖಲಿಸಲು ಹಾಗೂ ಆತನ/ಆಕೆಯ ಸಾಧನೆ, ಪ್ರತಿಭೆ, ಕೊರತೆಗಳನ್ನು ಇಲ್ಲಿ ನಮೂದಿಸಿ ಮುಂದಿನ ಪರಿಹಾರ ಬೋಧನೆ ಕೈಗೊಳ್ಳಲಾಗುತ್ತದೆ. 
Touch the below image to view large size


2017 - SSLC Batch students

2017ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯುತ್ತಿರುವ ಬೇಸಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ನಮ್ಮ ಕೋಚಿಂಗ್ ಕ್ಲಾಸ್‍ನ ವಿದ್ಯಾರ್ಥಿಗಳ (10th standard) ಚಿತ್ರಗಳು. 







Guruprasad .S. Hattigoudar (English subject teacher)
ಗುರುಪ್ರಸಾದ್ .ಎಸ್. ಹತ್ತಿಗೌಡರ


Basavaraj .A. Bamanalli (Science subject Teacher)

ಬಸವರಾಜ .ಅ. ಬಮನಳ್ಳಿ

Millennium Coaching classes vijayapura

ಮಿಲೇನಿಯಂ ಕೋಚಿಂಗ್ ಕ್ಲಾಸಿಸ್ ವಿಜಯಪುರ



ವಿದ್ಯಾರ್ಥಿಗಳಿಗೆ ಊಟ ಬಡಿಸುತ್ತಿರುವ ಶಿಕ್ಷಕರು

Saturday 14 January 2017

ತೇಲಿ ಸರ್ ಮತ್ತು ಗುರು ಸರ್ ಸಂದೇಶ

ಸಮಗ್ರ ಭಾರತದ ಎಲ್ಲ ಯುವ ವಿದ್ಯಾರ್ಥಿಗಳಿಗೂ, ಯೋಧರಿಗೂ, ರೈತರಿಗೂ ಹಾಗೂ ನಮ್ಮೆಲ್ಲ ಬಳಗಕ್ಕೆ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದಿದ್ದರು ಸ್ವಾಮಿ ವಿವೇಕಾನಂದರು. ಪ್ರತಿಯೊಬ್ಬರಲ್ಲಿಯೂ ಶಕ್ತಿ ಇರುತ್ತದೆ. ಆದರೆ ಅದನ್ನು ಗುರುತಿಸುವಲ್ಲಿ ಬಹಳಷ್ಟು ಜನ ವಿಫಲರಾಗಿರುವುದರಿಂದ ನಮ್ಮ ದೇಶ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗುತ್ತಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಅದ್ಭುತವಾದ, ಅಗೋಚರವಾದ ಶಕ್ತಿ ಇದೆ. ಆ ಶಕ್ತಿಯನ್ನು ಯಾರು ಬಳಸಿಕೊಳ್ಳುತ್ತಾರೋ ಅವರು ಈ ಜಗತ್ತನ್ನೇ ಗೆಲ್ಲಬಲ್ಲರು. ಉದಾಹರಣೆಗೆ ಲಾಲ್ ಬಹದ್ದೂರ್ ಶಾಸ್ತ್ರಿ, ಅಬ್ದುಲ್ ಕಲಾಂ, ನರೇಂದ್ರ ಮೋದಿ, ಥಾಮಸ್ ಆಲ್ವಾ ಎಡಿಸನ್, ಸಿ.ವಿ. ರಾಮನ್, ಸರ್ದಾರ್ ವಲ್ಲಭಬಾಯ್ ಪಟೇಲ್, ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಎನ್.ಎಂ.ಬಿರಾದಾರ ಸರ್ ಮುಂತಾದವರು.

       ಬಿಲ್ ಗೇಟ್ಸ್ ಹೇಳಿದ ಪ್ರಕಾರ, ಬಡತನದಲ್ಲಿ ಹುಟ್ಟಿದ್ದು ತಪ್ಪಲ್ಲ, ಬಡತನದಲ್ಲಿ ಸಾಯೋದು ತಪ್ಪು. ಆದರೆ ನಾವು ನಿಮಗೆ ಹೇಳುತ್ತೇವೆ. ಅಜ್ಞಾನದಲ್ಲಿ ಹುಟ್ಟಿದ್ದು ತಪ್ಪಲ್ಲ, ಅಜ್ಞಾನದಲ್ಲಿ ಸಾಯೋದು ತಪ್ಪು. ಮತ್ತು ಒಂದು ಮೂಲೆಯಲ್ಲಿ ಹುಟ್ಟಿದ್ದು ತಪ್ಪಲ್ಲ, ಇಡೀ ಜಗತ್ತಿಗೆ ಪರಿಚಯ ಆಗಲಾರದೇ ಅದೇ ಮೂಲೆಯಲ್ಲಿ ಸತ್ತಿದ್ದು ತಪ್ಪು. ವಿದ್ಯಾರ್ಥಿಗಳೇ, ಈ ಸಮಾಜಕ್ಕೆ ಒಳ್ಳೆಯ ಆಗುವ ರೀತಿಯಲ್ಲಿ ಕೆಲಸ ಮಾಡಲಿಕ್ಕೆ ಅಗಾಧವಾದ ಜ್ಞಾನವನ್ನು ಪಡೆದುಕೊಳ್ಳಿ. ಕೈ ಕಟ್ಟಿಕೊಂಡು ಕುಳಿತುಕೊಳ್ಳಬೇಡಿ. ಸೋಮಾರಿಗಳಾಗಬೇಡಿ. ಯಾವಾಗಲೂ ಹಸನ್ಮುಖಿಯಾಗಿರಿ. ಯಾವಾಗಲೂ ಸಮಾಜಕ್ಕೆ ಒಳ್ಳೆಯದಾಗುವ ಯಾವುದಾದರೂ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಸ್ತ್ರೀಯರಿಗೆ ಪೂಜ್ಯ ಭಾವನೆಯಿಂದ ಗೌರವಿಸಿ. ಏಕೆಂದರೆ, "ಯತ್ರ ನಾರ್ಯಸ್ತು ಪೂಜ್ಯಂತೇ, ರಮಂತೇ ತತ್ರ ದೇವತಾ:" ಎಂಬ ವೇದೋಕ್ತಿಯಂತೆ ಸ್ತ್ರೀಯರನ್ನು ಗೌರವಿಸುವಲ್ಲಿ ದೇವತೆಗಳು ವಾಸವಾಗಿರುತ್ತಾರೆ ಹಾಗೂ ಸ್ತ್ರೀಯರನ್ನು ಗೌರವಿಸುವ ಮನುಷ್ಯ ಎತ್ತರ ಮಟ್ಟಕ್ಕೆ ಹೋಗುತ್ತಾನೆ. ೨೪ ಗಂಟೆಗಳಲ್ಲಿ ಒಂದು ಗಂಟೆ ನಮ್ಮ ದೇಶದ ಚಿಂತನೆ ಮಾಡಿ. ದೇಶಕ್ಕಾಗಿ ಶ್ರಮಿಸಿ. ಆವಾಗ ನಮ್ಮ ಭವ್ಯ ಭಾರತ ದೇಶ ಬೇಗ ಪ್ರಗತಿ ಹೊಂದುತ್ತದೆ. ನಿಮ್ಮ ಕೈಯಿಂದ ಸಾಧ್ಯವಾದಷ್ಟು ಬಡವರ, ವೃದ್ಧರ, ದಿವ್ಯಾಂಗರ ಸೇವೆ ಮಾಡಿ. ಅಸಹಾಯಕ ಮಹಿಳೆಯರ ಧ್ವನಿಯಾಗಿ.

ಸರ್ವರಿಗೂ ಒಳ್ಳೆಯದಾಗಲಿ, ಶುಭವಾಗಲಿ. 

Founder of Blog - Teli sir